ಜಾತಿ,ಮತ,ಬಿಟ್ಟಿ ಭಾಗ್ಯಗಳು ಮತ್ತು ರಾಜಕೀಯ!| Religion&Politics,Freebies&Votes,Secularism&Discrimination_Go Hand in hand

ಜಾತಿ ರಾಜಕಾರಣದಲ್ಲಿ ಅಗ್ರಪಂಕ್ತಿ ಕಾಯ್ದುಕೊಳ್ಳುವ ಕುಮಾರ ಸಿದ್ದರು ಒಂದೆಡೆಯಾದರೆ, ಎಲ್ಲವ ಉಚಿತದಿ ನೀಡುವ ಕ್ರೇಜ್ ಇನ್ನೊಂದೆಡೆ! ಆಯಾ ಪ್ರದೇಶದಲ್ಲಿ ಯಾವ ಜಾತಿಯವರು ಹೆಚ್ಚಿರುವರೊ ಅವರಲ್ಲೇ ಒಬ್ಬಾತನಿಗೆ ಚುನಾವಣೆಗೆ ನಿಲ್ಲಲು ಟಿಕೆಟ್ ಕೊಡಿ ಎಂದು ದೇಶದ ಪ್ರಪ್ರಥಮ ಚುನಾವಣೆಯಲ್ಲಿ ತನ್ನ ಸಂಗಡಿಗರಿಗೆ ಕರೆ ಕೊಟ್ಟಿದ್ದನಂತೆ ಒಬ್ಬಾತ, ಆತ ಒಬ್ಬ ಮಹಾತ್ಮನ ಸ್ನೇಹಿತನಂತೆ, ಅಲ್ಲಿಂದಲೇ ಶುರುವಾಯಿತು ಎಂದು ಆರೋಪ ಹೊರಿಸಿಯೂ ಹೊರಿಸದವರಂತೆ ಇದ್ದರೆ ನಾವು ಕ್ಷೇಮ! ಇಂದಿನ ಅನೇಕ ಯುವಕ ಯುವತಿಯರು ತಾವು ಪೊಲಿಟಿಕಲಿ ನ್ಯೂಟ್ರಲ್, ಆದರೂ ಈ ಪಕ್ಷಕ್ಕೆ ತಮ್ಮ ಬೆಂಬಲ ಏಕೆಂದರೆ ಅದು ಜಾತ್ಯಾತೀತ(ಜಾತಿ+ಅತೀತ) ಎಂದು ಉತ್ತರಿಸುವ ರೀತಿ ಹಾಸ್ಯಾಸ್ಪದವಾಗಿ ತೋರುತ್ತದೆ. ಈ ಜಾತ್ಯಾತೀತ ಪಕ್ಷಗಳ ನಾಯಕರೆನಿಸಿಕೊಂಡವರು, ನಮ್ಮ ಪಕ್ಷ ಗೆದ್ದರೆ ದಲಿತ ಮುಖ್ಯಮಂತ್ರಿ, ನಮ್ಮ ಪಕ್ಷ ಗೆದ್ದರೆ ಮುಸ್ಲಿಂ ಮುಖ್ಯಮಂತ್ರಿ ಎಂದು ಹೇಳಿಕೆಗಳನ್ನು ಕೊಡುವುದ ನೋಡಿದರೆ ಇವರುಗಳು ಆಯಾ ಜಾತಿವಾರು ನೇತಾರರೇನೋ ಎಂದೆನಿಸುತ್ತದೆ. ಆದರೆ ಇವರುಗಳು ಜಾತ್ಯಾತೀತ ಜಾತಿವಾದಿಗಳಂತೆ ವರ್ತಿಸುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಅಭ್ಯರ್ಥಿ ಒಬ್ಬ ಚುನಾವಣೆ ಗೆದ್ದರೆ ಯಾವ ರೀತಿಯ ಆರ್ಥಿಕ ನೀತಿಯನ್ನು ಅನುಷ್ಠಾನಗೊಳಿಸುವೆ ಎಂಬ ಆತನ ವಾದ, ಮತ್ತು ಅದು ದೇಶಕ್ಕೆ ಹೇಗೆ ಉಪಯುಕ್ತ ಎಂದು ಪ್ರತಿಸ್ಪರ್ಧಿಯ ಜೊತೆ ಮುಖಾಮುಖಿಯಾಗಿ ಚರ್ಚೆ ನಡೆಸುತ್ತಾನ...