Karnataka Elections 2023- Reasons for BJPs failure! | ಬಿಜೆಪಿ ತಾನಾಗಿಯೇ ಮುಗ್ಗರಿಸಿತೇ ? - Vyakhyana Analysis

ಬಿಜೆಪಿಯ ಕರ್ನಾಟಕದ ಸೋಲನ್ನು ಹಲವು ಮಾಧ್ಯಮಗಳು ವಿವಿಧ  ಬಗೆಯಲ್ಲಿ ವರ್ಣಿಸಿವೆ. ಇಂತವರೇ ಕಾರಣ ಎಂದು  ದೂಷಿಸಿಯೂ ಇವೆ , ಸೋಲಿನ ಹೊರೆಯನ್ನು ಹೊರುವವರು ಯಾರಾದರೂ ಬೇಕಲ್ಲವೇ ?


ಹಾಗಾದರೆ ಬಿಜೆಪಿ ಕರುನಾಡಲ್ಲಿ ನಿಜವಾಗಿ ಏಕೆ ಸೋತಿತು? 

- ಶ್ರೀನಿಧಿ ಭಟ್ 


೧. ದಾಲ್ ರೋಟಿ ಬೇಯಿಸುವವರು, ರುಚಿ ಚನ್ನಾಗಿದೆ ಎಂದು ಒಂದೇ ರಾತ್ರಿಯಲ್ಲಿ ಯಾರನ್ನು ಕೇಳದೇ ಕರಾವಳಿಯ ಸಾರನ್ನು ಮತ್ತು ಉತ್ತರ ಕರ್ನಾಟಕದ ಮುದ್ದೆಯನ್ನು ತಯಾರಿಸಿ ಉಣಬಡಿಸಬಲ್ಲರೇ ? - ಸಾಧ್ಯವೇ ಇಲ್ಲ! ಆದರೆ ಬಿಜೆಪಿ ಮಾಡಿದ್ದೂ ಇದನ್ನೇ , ರುಚಿಕರವಾಗಿ ಅಡುಗೆ ಮಾಡಿಸಿಕೊಂಡು ಕರುನಾಡ ಊಟವ ಆನಂದಿಸುವ ಬದಲು ನಾವೇ ಅಡುಗೆ ಮಾಡುತ್ತೇವೆ ಎಂದು ಹುಬ್ಬೇರಿಸಿ ಬಂದ ಕಾರಣ ಅಡುಗೆಗೆ ಬೇಕಾದ ಎಲ್ಲ ಪರಿಕರಗಳು ಇದ್ದರೂ ಸರಿಯಾಗಿ ಸರಿಯಾದ ಸಮಯಕ್ಕೆ ಬಳಸಲು ಬಾರದೇ ಕೊನೆಗೆ ಗಂಜಿಯೇ ಗತಿಯಾಗಿದೆ. 

೨. ಅಂತಿಮ ಪಟ್ಟಿಯನ್ನು ಐಪಿಎಲ್ ಮ್ಯಾಚ್ನ  ಆಟಗಾರರ ಪಟ್ಟಿಯಂತೆ ಕೊನೆ ಗಳಿಗೆಯಲ್ಲಿ ಬಿಡುಗಡೆ ಮಾಡಿ ಪಂದ್ಯವನ್ನೇ ಗೆದ್ದಂತೆ ಬೀಗಿದ್ದ ಬಿಜೆಪಿ ಕನಿಷ್ಠ ಟಾಸ್ ಕೂಡ ಗೆಲ್ಲಲಿಲ್ಲ!


೩.
ಮೊದಲೇ ತಿಳಿಸಿದರೆ ಎಲ್ಲಿ ಪಕ್ಷಾಂತರ ಮಾಡಿ ಬಿಡುವರೋ ಎಂಬ ಭಯದಿಂದ!, ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಕ್ರಾಂತಿಕಾರಿ ಯೋಜನೆ ಹೊತ್ತಿದ್ದ ಬಿಜೆಪಿ ಅದನ್ನು ಹಾಲಿ ಬಿಜೆಪಿ ಶಾಸಕರಿಗೆ ಮನದಟ್ಟು ಮಾಡುವಲ್ಲಿ ಸೋತಿತ್ತು.  ಹಾಲಿ ಶಾಸಕರಿಗಿಂತ ಉತ್ತಮ ಯುವ ಶಕ್ತಿಯನ್ನು ನಿಲ್ಲಿಸುವ ನಿರ್ಧಾರ ಮಾಡಿರುವಾಗ ಅಂತಹ ಭಯ ಬಿಜೆಪಿಗೆ ಕಾಡಬಾರದಿತ್ತು. ಆದರೂ ಕಾಡಿದೆ ಎಂದರೆ ಅಲ್ಲಿ ಮತ ಸೆಳೆವ  ವರ್ಚಸ್ವಿ ನಾಯಕನನ್ನು ಬಿಜೆಪಿ ನಿಲ್ಲಿಸುತ್ತಿಲ್ಲ ಎಂಬುದೇ ಅರ್ಥ ಅಲ್ಲವೇ? 


೪. ಈ ಅಭ್ಯರ್ಥಿಗಳ  ಆಯ್ಕೆ ಯಾರು ಮಾಡುತ್ತಾರೆ? , ಯಾರೇ ಮಾಡಿದರೂ, ಫಲಿತಾಂಶ  ಸಂತೋಷ ತರುವಂತೆ ಇದ್ದರೆ ಸಂತೋಷಕ್ಕೇ  ಸಂತಸವಿದ್ದಂತೆ ಅಲ್ಲವೇ .. ಅದೂ ಏಕೆ ಹಳಿ ತಪ್ಪಿತು ?

 ೧. ಈ ಅಭ್ಯರ್ಥಿಗಳ ಆಯ್ಕೆ ಮಾಡುವವರು ಎಷ್ಟೇ ಸಂಘ ಮೂಲದವರಾಗಿದ್ದರೂ ಅವರಿಗೂ ಕೆಲವರಲ್ಲಿ ದ್ವೇಷವೋ, ಗಲಾಟೆಯೋ, ವೈಮನಸ್ಸೋ , ಇರುವುದು ಮನುಷ್ಯ ಸಹಜ ಗುಣ ಅಲ್ಲವೇ?

 ೨. ಹಾಗಾಗಿ ಇಲ್ಲಿ ಈ ಕೆಲವರಲ್ಲಿ ಕೆಲವರಿಗೆ ಟಿಕೆಟ್ ಕೈ ತಪ್ಪಿದೆ! ಅವರು ಗೆಲ್ಲಲು ಅರ್ಹರೂ ಆಗಿದ್ದರು . 

 ೩. ಉದಾಹರಣೆಗೆ ಪುತ್ತೂರಿನಲ್ಲಿ , ಅರುಣ್ ಕುಮಾರ್ ಪುತ್ತಿಲ ಅವರಿಗೆ ಟಿಕೆಟ್ ನೀಡಿದ್ದರೆ  ಬಿಜೆಪಿ ಪುತ್ತೂರಿನಲ್ಲಿ  ಅಭೂತಪೂರ್ವ ಗೆಲುವು ದಾಖಲಿಸುತ್ತಿತ್ತು. ಅದ ಬಿಟ್ಟು ವರ್ಚಸ್ಸೇ ಇಲ್ಲದ ನಾಯಕರಿಗೆ ಅಲ್ಲಿ ಟಿಕೆಟ್ ನೀಡಿದ್ದು , ಎಲ್ಲಿ ಪುತ್ತಿಲ ನಮ್ಮನ್ನು ಮೀರಿ ಬೆಳೆಯುತ್ತಾರೋ ಏನೋ ಎಂಬ ಕೆಲವು ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರ ಮತ್ಸರವನ್ನು ತೋರುವುದಿಲ್ಲವೇ?

  ಅಷ್ಟಕ್ಕೂ ಮತ್ಸರ ಏನು ತಪ್ಪಲ್ಲ ಬಿಡಿ , ಮನುಜ ಸಹಜ ಗುಣ ಅಲ್ಲವೇ?


೫. ಬಿಜೆಪಿಯ ಕೆಲವು ನಾಯಕರು ಕೆಲವು ವಿಷಯಗಳನ್ನು ಟೇಕನ್ ಫಾರ್ ಗ್ರಾಂಟೆಡ್ನಂತೆ ಮಾಡಿದ್ದೂ ಇದೆ. ಉದಾ - ಸೋಮಣ್ಣ ಅವರನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲೇ ನಿಲ್ಲಿಸಿದ್ದರೆ ಸುಲಭದ ಜಯಭೇರಿ ಬಾರಿಸುತ್ತಿದ್ದರು, ಅಲ್ಲಿ ಅವರು  ಮಾಡಬೇಕಾದ ಅಭಿವೃದ್ಧಿಯೂ ಭರದಿಂದ ಸಾಗಿತ್ತು ಆದ ಕರಣ ಬಿಜೆಪಿಯ ಚತುರರು ಅಲ್ಲಿ ಹೇಗೋ ಬಿಜೆಪಿ ಬರುತ್ತೆ ಮಿಕ್ಕ ಇನ್ನೆರೆಡು ಕಡೆ ಸೋಮ್ಮಣ್ಣ ನಿಂತರೆ ಮೂರು ಕಡೆ ಗೆದ್ದಂತೆ ಎಂಬ ಲೆಕ್ಕಾಚಾರ ಮಾಡಿದ್ದು RCB ಗೆಲುವಿನ ಲೆಕ್ಕಾಚಾರದಂತಿತ್ತು. 


೬.   ಪ್ರಚಾರದ ಕಣದಲ್ಲಿ ಸವಾಲೆನಿಸುವ ಯಾವ ಕ್ಷೇತ್ರಕ್ಕೂ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಣ ಸಿಗಲೂ ಇಲ್ಲ. ದಣಿವರಿಯದೆ ಪಕ್ಷಕ್ಕಾಗಿ  ಪ್ರಚಾರ ಮಾಡಿದ್ದು ಪ್ರಧಾನಿ ಮತ್ತು ಕೇಂದ್ರ ಸಚಿವರೊಂದಿಗೆ , ಪ್ರತಾಪ್ ಸಿಂಹ ಮತ್ತುಯೆಡಿಯೂರಪ್ಪ ಪುತ್ರ  ವಿಜೇಯೇಂದ್ರ ಮಾತ್ರ! , ಇನ್ನು ಉಡುಪಿ ಅಂತಹ ಕ್ಷೇತ್ರದಲ್ಲಿ ಹಿಂದುತ್ವಕ್ಕೆ ಕೆಲಸ  ಮಾಡುವ ಕಾರ್ಯಕರ್ತರು ಎಂದಿನಂತೆ ಬಿಜೆಪಿಯ ಪರ ಅಭ್ಯರ್ಥಿ ಯಾರೇ ಆದರೂ ಸಿದ್ದಾಂತಕ್ಕೆ ದುಡಿದರು. 


೭.  ಇನ್ನು ಪ್ರಧಾನಿಯನ್ನು  ಒಂದೆರೆಡು  ಬಾರಿ ಪ್ರಚಾರಕ್ಕೆ ಕರೆತಂದರೆ ಚಂದ. ಅದಬಿಟ್ಟು ಪದೇ ಪದೇ ಬಂದಾಗ ಮೊದಲೆರೆಡು ಬಾರಿ ಬಂದ ಚಾರ್ಮ್ ಕಾಣಸಿಗಲಿಲ್ಲ. ಪ್ರತೀ ಎಲೆಕ್ಷನ್ಗೆ ಪ್ರಧಾನಿಯೇ ಬರಬೇಕು ಅಂದರೆ ರಾಜ್ಯದಲ್ಲಿ ಅಂತಹ ನಾಯಕರಿಲ್ಲ ಎಂದು ಅವರೇ ಸಾರಿ ಹೇಳಿದಂತೆ ಅಲ್ಲವೇ ?
ನಾಯಕರಿಲ್ಲ ಎಂಬುದು ಸುಳ್ಳು ,ಬಿಜೆಪಿ ಹೈಕಮಾಂಡ್ ಗೆ ಎಲ್ಲದಕ್ಕೂ ಅವರ ಮಾತಿಗೆ ತಲೆಯಾಡಿಸುವ ಬಸವನಂತವರು ಬೇಕಷ್ಟೆ! 


೮. ಪ್ರತಾಪ್ ಸಿಂಹ ಅವರನ್ನು ರಾಜ್ಯ ರಾಜಕೀಯಕ್ಕೆ ಬಳಸಿಕೊಂಡರೆ ಅವರಂತಹ ಯುವ ನಾಯಕ ಬೇರೊಬ್ಬರಿಲ್ಲ ! ಆದರೆ ಆತ ಬೆಳೆಯುವುದು ಸ್ವತಃ ಕೆಲವು ಬಿಜೆಪಿಗರಿಗೇ ಇಷ್ಟವಿಲ್ಲ ಎಂಬಂತೆ ಕಾಣುತ್ತೆ. 


೯. ಲಿಂಗಾಯಿತರ ಪರ ಮುಖ್ಯಮಂತ್ರಿ ಎಂದು ಬೊಮ್ಮಾಯಿ ಅವರನ್ನು ಕೂರಿಸಿದ್ದೇನೊ ಹೌದು,ಒಂದು ಸಚಿವ ಸಂಪುಟ ವಿಸ್ತರಣೆಗೆ ಹತ್ತು ಬಾರಿ ಡೆಲ್ಲಿಗೆ ಕರೆದಿದ್ದ ಬಿಜೆಪಿ ಅದಾವ ಪುರುಷಾರ್ಥಕ್ಕೆ ಅವರನ್ನು ಮುಖ್ಯ ಮಂತ್ರಿ ಮಾಡಿತೋ ಏನೋ ! ಲಿಂಗಾಯಿತರೇ ಮತ ನೀಡಲಿಲ್ಲ ಕೊನೆಗೆ !


೧೦. ಇನ್ನು ಬಿಜೆಪಿಯ ರಾಜ್ಯ  ಗೃಹ ಸಚಿವರಾಗಿದ್ದವರು , ಇಂಟರ್ನ್ಯಾಷನಲ್ ಮ್ಯಾಚ್ ನಲ್ಲಿ KL Rahul ಹೆದರಿಕೊಂಡು ಬ್ಯಾಟಿಂಗ್ ಮಾಡುವಂತಿತ್ತು ಅವರ ಕಾರ್ಯವೈಖರಿ. ಒಂದೇ ಒಂದು ಸ್ಪಷ್ಟ ನಿರ್ಧಾರ ಇರಲಿಲ್ಲ ಒಟ್ಟಾರೆ ಜನರಲ್ಲಿ ಭರವಸೆ ಮೂಡಿಸಲಿಲ್ಲ.  ಅದರಲ್ಲೂ ಹಿಂದೂ ಕಾರ್ಯಕರ್ತರಿಗೇ ನೇರವಾಗಿ ನ್ಯಾಯ ಒದಗಿಸಲು ಸಾಧ್ಯವಾಗದವರು ಅದಾವ ಸಂಘದ ಮೂಲದಿಂದ ಬಂದವರೋ ?!!! 


೧೧. ಕೊನೇ ಪಕ್ಷ ಬಿಜೆಪಿ ಸರ್ಕಾರ ಮಾಡಿದ  ಅಭಿವೃದ್ಧಿಯನ್ನು ಜನರಿಗೆ ತಲುಪಿಸಲು ಪೂರ್ಣ ಪ್ರಮಾಣದಲ್ಲಿ ವಿಫಲವಾಗಿತ್ತು. 


೧೨. ವಾರ್ ರೂಮ್, ಮೀಡಿಯಾ ರೂಮ್, IT Cell , ದೇಶದ ಅತ್ಯುತ್ತಮ ಟ್ಯಾಲೆಂಟ್ ಗಳನ್ನು ಇಟ್ಟ್ಕೊಂಡು ಕೂಡ 40% Commision ಎಂಬ ಫೇಕ್ Narrative ಅನ್ನು ಎದುರಿಸಲು ಆಗದೇ ಹೋದದ್ದು ವಿಪರ್ಯಾಸ. 


೧೩. ಹೊಸದಾಗಿ ನಿರ್ಮಿತ ಕಾಲೇಜುಗಳು, ಐಐಟಿ , ಮೆಡಿಕಲ್ ಕಾಲೇಜುಗಳು , ಕೋವಿಡ್ ಅನ್ನು ನಿಭಾಯಿಸಿದ್ದು ,ಸ್ವದೇಶೀ ವ್ಯಾಕ್ಸೀನ್ ನೀಡಿದ್ದು,  ಹೊಸ ಏರ್ ಪೋರ್ಟ್  , ಎಕ್ಸ್ಪ್ರೆಸ್ ಹೈವೇ , ಹೆದ್ದಾರಿಗಳು ,ಮೆಟ್ರೋ , ರೈಲ್ವೆ ನಿಲ್ದಾಣಗಳು ,UPI , ಪ್ರಧಾನಮಂತ್ರಿ ಜನೌಶದ್ ಇಂತಹ ಅದೆಷ್ಟೋ ಮಾಡಿದ  ಕಾರ್ಯ ವಿದ್ದರೂ ಅದನ್ನು ಮಾರ್ಕೆಟ್ ಮಾಡಲು  ಬಿಜೆಪಿ ಸೋತಿತು. 


೧೪. ಇವನ್ನೆಲ್ಲ ಜನರಿಗೆ ತಲುಪಿಸಲು ಒಂದು ವರ್ಚಸ್ವಿ ನಾಯಕ ಇದ್ದರೂ ಬಳಸಿಕೊಳ್ಳದೇ ಇದ್ದದ್ದು ಬಿಜೆಪಿಯ ಸಾರಥ್ಯದ ನ್ಯೂನ್ಯತೆಗೆ ಹಿಡಿದ ಕನ್ನಡಿ. 


೧೫. ಹಳೆ  ಮೈಸೂರು ಭಾಗದಲ್ಲಿ ಭರ್ಜರಿ ರೋಡ್ ಶೋ ಮಾಡಿದ್ದೆ ಮಾಡಿದ್ದೂ , ಆದರೆ ಅಲ್ಲಿಯ ಜನರ ತಿಳಿವಳಿಕೆಯ ಪರಿ , ಅವರ ಚಿಂತನಾ ರೀತಿ ಅರ್ಥಮಾಡಿಕೊಳ್ಳದೆ ಹೋಯಿತು. ಉದಾ - ಮಂಡ್ಯ ದಲ್ಲಿ ಜೆಪಿ ನಡ್ಡಾ ಬಿಜೆಪಿ ಪರ  ಪ್ರಚಾರ ಮಾಡುವುದು ಒಂದೇ ನಾವು ನೀವು ಪ್ರಚಾರ ಮಾಡುವುದು ಒಂದೇ ಅಲ್ಲವೇ? 


೧೬. ಹಗಲಿರುಳು ಶ್ರಮಿಸಿದ, ಅದೆಷ್ಟೋ ಅಭಿವೃದ್ಧಿ ಕಾರ್ಯ ಮಾಡಿದ  ಪ್ರೀತಮ್ ಗೌಡ ಸೋತಿರುವಾಗ ,ಒಂದು ತಿಳಿಯುವುದು ಏನೆಂದರೆ ಅಲ್ಲಿಯ ಜನ ಅಭಿವೃದ್ಧಿಗಲ್ಲ ಬದಲಿ ಜಾತಿಗೆ ಅದರಲ್ಲೂ ಕೆಲವೇ ಕೆಲವು ಕುಟುಂಬಕ್ಕೆ ಮಾತ್ರ ಮತ ನೀಡುತ್ತಾರೆ , ಅವರಿಗೆ ರೋಡ್ ಇಲ್ಲದಿದ್ದರೂ , , ಶಿಕ್ಷಣ ಇಲ್ಲದಿದ್ದರೂ ನೆಡಿಯುತ್ತೆ ಆದರೆ ಜಾತಿ ಮಕ್ಕಳು ಅದರಲ್ಲೂ ಒಂದೇ ಕುಟುಂಬದ ಜಾತಿ ಮಕ್ಕಳು ಬೆಳೆಯಬೇಕು ಎಂಬ ಜನ ಅಲ್ಲಿರುವಾಗ  ಬಿಜೆಪಿಯವರು  ನಾವು ಅಭಿವೃದ್ಧಿ ಮಾಡಿದ್ದೇವೆ ಮತ ಹಾಕಿ ಅಂದರೆ ಹಾಕುತ್ತಾರೆ?


೧೭. ಇನ್ನು ಹಳೆ ಮೈಸೂರು ಭಾಗದಲ್ಲಿ ಮತ್ತು ಕೆಲವು ಕಡೆಗಳಲ್ಲಿ , ಏನೆ ಅಭಿವೃದ್ಧಿ ಮಾಡಿದ್ದರೂ ಅಲ್ಲಿಯ ಜನ ಬಿಟ್ಟಿ ಪಡೆಯಲು ಬಯಸುವವರೇ ಹೊರತು ಅಭಿವೃದ್ಧಿಯನ್ನಲ್ಲ ಎಂಬುದು ಸಾಬೀತಾಗಿದೆ. ಇನ್ನು ಹಲವುಕಡೆ ಬಿಜೆಪಿ ತನ್ನ ಅಭ್ಯರ್ಥಿಗಳ  ಆಯ್ಕೆ ಇಂದ ಸೋತಿದೆ. ಚಿತ್ರದುರ್ಗ,ದಾವಣಗೆರೆ ಇಲ್ಲೆಲ್ಲಾ ಜನ ಬಿಟ್ಟಿ ಭಾಗ್ಯಕ್ಕೆ ಹೇಗೆ  ಮನಸೋತರೋ ಹಾಗಯೇ ಬಿಜೆಪಿ ತನ್ನ ಅಭ್ಯರ್ಥಿಗಳ  ಆಯ್ಕೆಯಲ್ಲೂ ಸೋತಿದೆ. 


೧೮. ಒಟ್ಟಾರೆಯಾಗಿ Chat GPT ಬಂದಿರುವ ಕಾಲದಲ್ಲೂ ಜನ ಬಿಟ್ಟಿ ತಿನ್ನಲು ಬಯಸಿ ಜಾತಿ ನೋಡಿ ಮತ ನೀಡುತ್ತಾರೆ  ಅಭಿವೃದ್ಧಿಗೆ ಅಲ್ಲ ಎಂದರೆ ವಿಪರ್ಯಾಸ ಅಲ್ಲವೇ ?


೧೯. ಹಾಗೆಯೇ ಇದು ಬಿಜೆಪಿಯ ಹೈಕಮಾಂಡ್ ಗೆ ಒಂದು ಪಾಠವಿದ್ದಂತೆ, ಶಿರಸಿಯಲ್ಲಿ ಕಾಗೇರಿ ಅಂತಹ ನಾಯಕರು ಸೋತಿದ್ದಾರೆ ಅಂದರೆ  ಒಂದೋ ಜನ ಬಿಟ್ಟಿ ಸಿಗುತ್ತದೆ ಎಂದು ಅಷ್ಟು ಮಾರುಹೋಗಿದ್ದಾರೆ. ಅಥವಾ ಕಂಗ್ರೆಸ್ಸ್ ನ ಅಹಿಂದ ಮತ್ತು ಜಾತೀಯತೆಯ Narrative ಅನ್ನು ಕೌಂಟರ್ ಮಾಡಲು ಬಿಜೆಪಿಗರು ಸೋತಿದ್ದಾರೆ. 







  editorial@vyakhyana.com






Comments

Popular posts from this blog

೨೦೨೪ ರ ಟಾಪ್ ೧೦ ಕನ್ನಡ ಚಲನಚಿತ್ರಗಳು : Top 10 Kannada Movies of 2024

ನಿರ್ದೇಶಕ ಗುರುಪ್ರಸಾದ್ ನೆನೆಪಿನಲ್ಲಿ - ಎರಡನೇಸಲ | In memory of Director Guruprasad - EradaneSala

India-Pakistan : A Civilizational War | Shrinidhi Bhat