Posts

Showing posts from April, 2025

ನೋಡಿದವರು ಏನಂತಾರೆ । ಸಿನಿ ವಿಮರ್ಶೆ । ಶ್ರೀನಿಧಿ ಭಟ್

Image
  ನೋಡಿದವರು ಏನಂತಾರೆ      ಸಿನಿ ವಿಮರ್ಶೆ  ಕೆಲವೊಂದು ಕ್ಷಣವನ್ನೋ ಸಂದರ್ಭವನ್ನೋ ಜೀವಿಸಿದರಷ್ಟೇ ಆ ಭಾವದ ಪೂರ್ಣಾನುಭವ ಎಂಬ ಒಪ್ಪಿಯೂ ಒಪ್ಪಲಾಗದ ಸಾಲುಗಳ ಒಳಾರ್ಥದಲ್ಲಿ ನದಿಯ ತಿಳಿನೀರಿನಂತೆ  ಸಾಗುವ ಕಥನ  “ ನೋಡಿದವರು ಏನಂತಾರೆ “ .  ಕೆಲವೊಮ್ಮೆ ಯುವತಿಯೋರ್ವಳು  ಧರಿಸುವ ಕುಪ್ಪಸಕ್ಕೆ ಕಸೂತಿ ಮಾಡಿಸದಿದ್ದರೆ ನೋಡಿದವರು ಅದೇನೆನ್ನುವರೋ ಎಂಬ ಕಾರಣಕ್ಕೆ ಮಾಡಿಸುವ ಕಸೂತಿಯಂತೆ ಈ ಚಿತ್ರಕಥೆಯಲ್ಲಿ ವ್ಯರ್ಥವಾಗಿ ಯಾವ ವಿಷಯವನ್ನೂ ಬಲವಂತವಾಗಿ ಪೋಣಿಸದೇ ಇದ್ದದ್ದು ಕಥೆಯ ತ್ರಾಣವನ್ನು ಹಿಡಿದಿಟ್ಟಿತ್ತು .  ಪ್ರೇಮ- ಮೋಹಕ್ಕಿಂತ ಒಡನಾಟದ ಸಿಹಿ ಸವಿದ ಮನಕ್ಕೆ ಒಡನಾಡಿಯ ಸಾಮೀಪ್ಯದ ವಿರಹದಿಂದಾದ ಸಿದ್ದಾರ್ಥನ ಚಡಪಡಿಕೆಗೆ , ಗಮನ ಕೇಂದ್ರೀಕರಿಸಲಾಗದೇ ಸಿಡುಕುವ ಮನಸ್ಥಿತಿಯ ಸಂಭಾಷಣೆಗಳು ನಿನ್ನೆ ಮೊನ್ನೆ ನಮ್ಮ ನಿಮ್ಮ ಆಫೀಸಿನದ್ದೋ ಎಂಬಂತಿದೆ. ನೋಡುಗರ ಚಿತ್ತವ ಹಿಡಿದಿಡದಲೇನೋ ಎಂಬಂತೆ ಆಗಾಗ ಬಂದು ಹೊಗುವ ನಾಯಕನ ತಾಯಿಯ ಉಲ್ಲೇಕ,  ಮಡಿಕೆ ತುಂಬಲು ಒಂದು ತಂಬಿಕೆ ನೀರು ಬೇಕೆಂದಾಗ  ಸಣ್ಣ ತಂಬಿಗೆ ನೀರು ಸಿಗದೇ ಕೊಡಪಾನ ಪೂರ್ತಿ ನೀರು ಸುರಿದಂತೆ ಭಾವ ಸ್ಪುರಿಸಲು ತಕ್ಕ ಮಟ್ಟಿನ ಪ್ರಯತ್ನ ನಿರ್ದೇಶಕ ಕುಲದೀಪ್ ಕಾರಿಯಪ್ಪ ಅವರದ್ದು.  ಚಡಪಡಿಕೆಯ ನಡುವೆಯೂ , ತನ್ನ ಸಹೋದ್ಯೋಗಿಯೊಂದಿಗೆ ಆಕೆಯ ಬಾಸ್ ಆಗಿದ್ದರೂ ಆಕೆಯ ಅಪೇಕ್ಷೆಯಂತೆ ಮೊದಲು ತಿರಸ್ಕರಿಸಿದ್ದರು ನಂ...