ನಿರ್ದೇಶಕ ಗುರುಪ್ರಸಾದ್ ನೆನೆಪಿನಲ್ಲಿ - ಎರಡನೇಸಲ | In memory of Director Guruprasad - EradaneSala
ನಿರ್ದೇಶಕ ಗುರುಪ್ರಸಾದ್ ನೆನೆಪಿನಲ್ಲಿ - ಎರಡನೇಸಲ ಕನ್ನಡ ದಲ್ಲಿ ಕಾಣಸಿಗುವ ಚಲನಚಿತ್ರ ನಿರ್ದೇಶಕರಲ್ಲಿ ಗುರುಪ್ರಸಾದ್ ಒಬ್ಬ ಮಲೆನಾಡ ಊಟದ ಅಪ್ಪೇಮಿಡಿ ಉಪ್ಪಿನಕಾಯಿಯಂತೆ ವಿರಳ ವರ್ಗದ ತಳಿಯಂತಿದ್ದವರು . ಯಾರೂ ಊಹಿಸದಂತೆ ಇಳೆಯ ತೊರೆದ ಈತ ,ಅದೆಷ್ಟೋ ಕಾಂಟ್ರವರ್ಸಿಗಳಲ್ಲಿ ಮಿಂದೆದಿದ್ದರೂ , ಅವರ ಬರವಣಿಗೆ , ಕನ್ನಡ ಭಾಷಾ ಪಾಂಡಿತ್ಯ , ಚಿತ್ರಕಥೆ ಹೆಣೆವ ಪರಿ ಇವೆಲ್ಲಕ್ಕೂ ಮೀರಿ ಮನಮುಟ್ಟುವ ಅವರ ಸಂಭಾಷಣೆಗಳು ಇನ್ನು ಯಾರು ಬರೆದಾರು ? ಹೊಡಿ ಬಡಿ ಕೊಲ್ಲು ಕೊಚ್ಚು ಎಂಬ ಇಂದಿನ ಸಂಭಾಷಣೆಗಳಲ್ಲಿ ನಾಯಕನನ್ನು ಅರ್ಧರಥಿಕನಾಗಿ ಬಿಂಬಿಸುವಷ್ಟು ಉಪ್ಪಿಲ್ಲದ ಸಾರಿನಂಥಾ ಕಥೆಗೆ ನಾಯಕನನ್ನು ಮಹಾರಥಿಕನಂತೆ ತೋರ್ವ ಅರ್ಥವಿಲ್ಲದ ಸಂಭಾಷಣೆಗೆ ಸೀಟಿ ಹೊಡೆವ ಇಂದಿನ ಪ್ರೇಕ್ಷಕರ ನಡುವೆ , ಇಂಥಾ ವೃಷ್ಟ್ಯಾನ್ನವ ಮರೆತೆವೆಂಬ ಮರೆವು ಕೂಡಾ ಅವರಲ್ಲಿ ಸುಳಿಯದು . ಹೀಗಿರಲು , ಗುರುಪ್ರಸಾದ್ ನೆನೆಪು ಮಾಸುವ ಮೊದಲು ಅವರ ನನ್ನಿಷ್ಟದ ಅಷ್ಟೇನು ಹಣ ಗಳಿಸದ ಒಂದು ಕ್ಲಾಸಿಕ್ ಚಿತ್ರ - “ಎರಡನೇಸಲ” .ಇದೇ ಚಿತ್ರ ಈಗ ಇಂಗ್ಲಿಷ್ ನಲ್ಲೋ ಇಲ್ಲ ನಮ್ಮ ನೆರೆಯ ಮಲೆಯಾಳಂ ನಲ್ಲೋ ಬಂದರೆ ನಮ್ಮ ಇದೇ ಯುವ ಜನತೆ ಕಣ್ಣಿನ ಜೊತೆ ಬಾಯಿ ಬಿಟ್ಟು ನೋಡಿಯಾರು. ಎರಡನೇಸಲ - ' ವಿಮರ್ಷೆ'...