Posts

Showing posts from May, 2023

Karnataka Elections 2023- Reasons for BJPs failure! | ಬಿಜೆಪಿ ತಾನಾಗಿಯೇ ಮುಗ್ಗರಿಸಿತೇ ? - Vyakhyana Analysis

Image
ಬಿಜೆಪಿಯ ಕರ್ನಾಟಕದ ಸೋಲನ್ನು ಹಲವು ಮಾಧ್ಯಮಗಳು ವಿವಿಧ  ಬಗೆಯಲ್ಲಿ ವರ್ಣಿಸಿವೆ. ಇಂತವರೇ ಕಾರಣ ಎಂದು  ದೂಷಿಸಿಯೂ ಇವೆ , ಸೋಲಿನ ಹೊರೆಯನ್ನು ಹೊರುವವರು ಯಾರಾದರೂ ಬೇಕಲ್ಲವೇ ? ಹಾಗಾದರೆ ಬಿಜೆಪಿ ಕರುನಾಡಲ್ಲಿ ನಿಜವಾಗಿ ಏಕೆ ಸೋತಿತು?  - ಶ್ರೀನಿಧಿ ಭಟ್  ೧. ದಾಲ್ ರೋಟಿ ಬೇಯಿಸುವವರು, ರುಚಿ ಚನ್ನಾಗಿದೆ ಎಂದು ಒಂದೇ ರಾತ್ರಿಯಲ್ಲಿ ಯಾರನ್ನು ಕೇಳದೇ ಕರಾವಳಿಯ ಸಾರನ್ನು ಮತ್ತು ಉತ್ತರ ಕರ್ನಾಟಕದ ಮುದ್ದೆಯನ್ನು ತಯಾರಿಸಿ ಉಣಬಡಿಸಬಲ್ಲರೇ ? - ಸಾಧ್ಯವೇ ಇಲ್ಲ! ಆದರೆ ಬಿಜೆಪಿ ಮಾಡಿದ್ದೂ ಇದನ್ನೇ , ರುಚಿಕರವಾಗಿ ಅಡುಗೆ ಮಾಡಿಸಿಕೊಂಡು ಕರುನಾಡ ಊಟವ ಆನಂದಿಸುವ ಬದಲು ನಾವೇ ಅಡುಗೆ ಮಾಡುತ್ತೇವೆ ಎಂದು ಹುಬ್ಬೇರಿಸಿ ಬಂದ ಕಾರಣ ಅಡುಗೆಗೆ ಬೇಕಾದ ಎಲ್ಲ ಪರಿಕರಗಳು ಇದ್ದರೂ ಸರಿಯಾಗಿ ಸರಿಯಾದ ಸಮಯಕ್ಕೆ ಬಳಸಲು ಬಾರದೇ ಕೊನೆಗೆ ಗಂಜಿಯೇ ಗತಿಯಾಗಿದೆ.  ೨. ಅಂತಿಮ ಪಟ್ಟಿಯನ್ನು ಐಪಿಎಲ್ ಮ್ಯಾಚ್ನ  ಆಟಗಾರರ ಪಟ್ಟಿಯಂತೆ ಕೊನೆ ಗಳಿಗೆಯಲ್ಲಿ ಬಿಡುಗಡೆ ಮಾಡಿ ಪಂದ್ಯವನ್ನೇ ಗೆದ್ದಂತೆ ಬೀಗಿದ್ದ ಬಿಜೆಪಿ ಕನಿಷ್ಠ ಟಾಸ್ ಕೂಡ ಗೆಲ್ಲಲಿಲ್ಲ! ೩. ಮೊದಲೇ ತಿಳಿಸಿದರೆ ಎಲ್ಲಿ ಪಕ್ಷಾಂತರ ಮಾಡಿ ಬಿಡುವರೋ ಎಂಬ ಭಯದಿಂದ!,  ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಕ್ರಾಂತಿಕಾರಿ ಯೋಜನೆ ಹೊತ್ತಿದ್ದ ಬಿಜೆಪಿ ಅದನ್ನು  ಹಾಲಿ ಬಿಜೆಪಿ ಶಾಸಕರಿಗೆ ಮನದಟ್ಟು ಮಾಡುವಲ್ಲಿ ಸೋತಿತ್ತು.  ಹಾಲಿ ಶಾಸಕರಿಗಿಂತ ಉತ್ತಮ ಯುವ ಶಕ್...